BhagavadGita Motivates to Mind the Mind

Our Mind or Manas is a wonderful thing as long we can control it! Mind is often compared with a monkey (Mana Markatah), which is constantly jumping from tree to tree / hopping from a branch to another on a tree. Like this monkey’s behavior, mind tends to switch between various thoughts. It is the our job to control it by exercising our intellect (Buddhi). If left uncontrolled, we won’t be able to do any task properly and might even end up with a clouded intellect if the mind overpowers the intellect.

Yes, Mind can’t be without thoughts. We need to change the quality of our thoughts and give our mind a constructive topic / thing to think about. The same needs to applied while meditating too.

Lord Sri Krishna, in Srimad BhagavadGita acknowledges that the mind is fickle and motivates us control it by giving guidelines to achieve the same.

Let us delve into the insightful blog by our respected blogger, Sri. RamaMurthy; he has explained the BhagavadGita Shlokas that deal with mind control and also mentioned a beautiful Kagga from Sri. D.V.G (famous philosopher and writer, Dr. D.V.Gundappa).

(NOTE: This blog post is part of a series; please refer to BhagavadGita, The Solution Provider to access the complete series.)

” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “
ಅಧ್ಯಾಯ 6 ಆತ್ಮ ಸಂಯಮ / ಧ್ಯಾನ ಯೋಗ, ಶ್ಲೋಕ 5, 6, 26, & 35 (Shloka # 5, 6, 26 & 35 of Adhyaya 6, “Atma Samyaya Yoga / Dhyana Yoga”)

ಹಿಂದಿನ ಅಧ್ಯಾಯ ದಲ್ಲಿ ಕರ್ಮಸಂನ್ಯಾಸದ ಬಗ್ಗೆ ಹೇಳಿ, ಅರ್ಜುನನ್ನ ಮೆಟ್ಟಲು ಮೆಟ್ಟಲಾಗಿ step by step ಈಗ ಆತ್ಮ ಸಂಯಮದ (ಧ್ಯಾನ) ಕಡೆ ಕರ್ಕೊಂಡ್ಹೋಗ್ತಿದಾನೆ. ಈ ಅಧ್ಯಾಯದಲ್ಲಿ (ಆತ್ಮ) ಜ್ಞಾನದ ಪ್ರಾಪ್ತಿಗೆ, ಸತ್ಕರ್ಮಾಚರಣೆಗೆ ಸ್ಸಾಧಕವಾದ ಧ್ಯಾನದ ಬಗ್ಗೆ ಹೇಳ್ತಾ ಹೋಗ್ತಾನೆ.
ಮೊದಲಿಗೆ, ಯೋಗಿಯಾದವನು ಕರ್ಮಫಲತ್ಯಾಗಭಾವದಿಂದ ಕರ್ಮ ಮಾಡ್ತಾನೆ, ಅಂತ ಹೇಳ್ತಾ,- ನಮ್ಮ ಆತ್ಮೋದ್ಧಾರವನ್ನು ನಾವೇ ಮಾಡ್ಕೋಬೇಕು – ಉದ್ಧರೇದಾತ್ಮನಾತ್ಮಾನಂ . . . ಅಂತ ಹೇಳ್ತಾ ಹೋಗ್ತಾನೆ.
ಎಲ್ಲದಕ್ಕೂ ಇಂದ್ರಿಯ ನಿಗ್ರಹ ಬೇಕು ಅಂತಾರೆ, ಧ್ಯಾನದಿಂದ ಇದನ್ನ ಸಾಧಿಸಬಹದೂ ಅಂತಾನೂ ಹೇಳ್ತಾರೆ. ಆದ್ರೆ, ಧ್ಯಾನ ಅಂತ ಕೂತ್ಕೊಂಡಾಗ ನಮಗೆ ಏಕಾಗ್ರತೆ ಅನ್ನೋದು ಬರೋದೇ ಇಲ್ವೇ. ದೇವರ ಮುಂದೆ ಪೂಜೆ, ಧ್ಯಾನ ಅಂತ ಕೂತ್ಕೊಂಡ್ರೆ, ಆವಾಗ್ಲೇ ನಮಗೆ ಎಲ್ಲಿಲ್ಲದ ಚಿಂತೆ, ಯೋಚ್ನೆ ಶುರು ಆಗೋದು. ಎಲ್ರಿಗೂ ಹಾಗೆ ಅಲ್ದೇ ಇದ್ರೂ, ಸಾಮಾನ್ಯವಾಗಿ ಎಲ್ಲರಿಗೂ ಈ ಅನುಭವವಾಗಿರಬಹುದು. ಇದನ್ನೇ ಮುಂದೆ, ಅರ್ಜುನ ನಮ್ಮ ಪ್ರಶ್ನೆ ಅನ್ನೋಹಾಗೆ ಕೇಳ್ತಾನೆ – ಚಂಚಲಂ ಹಿ ಮನಃ ಕೃಷ್ಣ . . . ಮನಸ್ಸು ತುಂಬಾ ಚಂಚಲ . . . ಏಕಾಗ್ರತೆ ಸಾಧಿಸೋದು ಕಷ್ಟಸಾಧ್ಯ ಅಂತಾನೆ.
ಉತ್ತರರೂಪವಾಗಿ ಶ್ರೀ ಕೃಷ್ಣ ಚಂಚಲ ಮನಸ್ಸನ್ನು ಧ್ಯಾನದಿಂದ ಹೇಗೆ ಹೋಗಲಾಡಿಸಿಕೊಳ್ಳಬಹುದು ಅಂತ ಹೇಳ್ತಾ, ಧ್ಯಾನ ಹೇಗೆ ಮಾಡ್ಬೇಕು ಅನ್ನೋ ವಿವರಣೆ ಕೊಡ್ತಾ ಮುಂದೆ 10 – 12 ಶ್ಲೋಕಗಳಲ್ಲಿ ವಿವರಣೆ ಕೊಡ್ತಾ ಹೋಗ್ತಾನೆ.
ಈ ಧ್ಯಾನ ಸಾಧನೆಗೆ ನಾವು ಮಾಡುವ ಊಟ (ಯುಕ್ತಾಹಾರ), ವಿಹಾರ (ನಮ್ಮ ಓಡಾಟ), ನಿದ್ರೆ ಇವುಗಳು ನಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮ ಇವುಗಳ ಬಗ್ಗೆನೂ ಶ್ರೀ ಕೃಷ್ಣ ಹೇಳಿದ್ದು ಇವತ್ತಿಗೂ ಸತ್ಯಅನ್ಸುತ್ತೆ. ಈಗ ಕಾಣುತ್ತಿರುವ obesity ಅಂತ ಏನು ಹೇಳ್ತೀವೋ ಅದಕ್ಕೆ ಉತ್ತರ ರೂಪವಾಗಿದೆ. ಆರನೆಯ ಅಧ್ಯಾಯದಲ್ಲಿ ಬರುವ ಈ ಎರಡು ಶ್ಲೋಕಗಳು (ಶ್ಲೋಕ 16-17). ಇವು ನಮ್ಮ ಸ್ವಸ್ಥ ಆರೋಗ್ಯ ಕಾಪಾಡಿಕೋಳ್ಳಲು ಮಾರ್ಗದರ್ಶಿಯೂ ಹೌದು. ಈ ಅಧ್ಯಾಯಕ್ಕೆ ಬಂದಾಗೆಲ್ಲ ಇದು ಜ್ಞಾಪಕಕ್ಕೆ ಬರುತ್ತೆ, ನಾವು ಊಟಕ್ಕೆ ಕುತ್ಕೊಳೋಕೆ ಮುಂಚೆ ಇದನ್ನ ಒಂದ್ಸಲ ಹೇಳ್ಕೊಳೋ ಅಭ್ಯಾಸ ಮಾಡ್ಕೋ ಬೇಕು ಅನ್ಸುತ್ತೆ. ಆದ್ರೆ ನಂಗಂತೂ ಭಯ, ಚೆನ್ನಾಗಿದೆ ಅನ್ಸಿದ್ರೆ ಒಂದು ತುತ್ತು ಜಾಸ್ತಿನೇ ತಿಂದು ಬಿಡ್ತೀನಿ. ಸಿಹಿ, ಖಾರ ಎಲ್ಲವೂ ನನಗೆ ಪ್ರಿಯ, ಪ್ರಯತ್ನ ಅಂತೂ ಮಾಡ್ತಾನೆ ಇದೀನಿ. ಇರ್ಲಿ, ಶ್ಲೋಕ ವನ್ನಂತೂ ನೋಡೋಣ.
ನಾತ್ಯಶ್ನಸ್ತು ಯೋಗೋಸ್ತಿ ನಚೈಕಾಂತಮನಶ್ನತಃ |
ನ ಚಾತಿ ಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||16 ||
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋಭವತಿ ದುಃಖಹಾ ||17 ||
ಅತಿಯಾಗಿ ಊಟಮಾಡುವವನು, ಏನೂ ಊಟ ಮಾಡದೇ ಇರುವವನು, ಅತಿಯಾಗಿ ನಿದ್ರೆಮಾಡುವವನು , ನಿದ್ರೆ ಇಲ್ಲದೇ ಇರುವವನಿಗೆ ಧ್ಯಾನಯೋಗ ಸಾಧ್ಯವಿಲ್ಲ.
ಯುಕ್ತ ಆಹಾರ ವಿಹಾರದಲ್ಲಿ (ದೈಹಿಕ ಚಟುವಟಿಕೆಯಲ್ಲಿ) ಕರ್ಮದಲ್ಲಿ ತೊಡಗಿದವನು, ಅವಶ್ಯಕವಾದಷ್ಟು ನಿದ್ರೆ ಹಾಗೂ ಎಚ್ಚರವನ್ನು ಇತಿಮಿತಿಯಲ್ಲಿ ಕಾಪಾಡಿಕೊಂಡು ಬರುವವನು ದು:ಖಗಳಿಂದ ದೂರನಾಗ್ತಾನೆ, ಯೋಗ ಸಿದ್ಧಿಯಾಗುತ್ತೆ.
ಪ್ರತಿಯೊಂದು ಶ್ಲೋಕವೂ ಅರ್ಥಪೂರ್ಣ. ಓದ್ತಾ ಓದ್ತಾ ನಮ್ಮ ನಿತ್ಯಜೀವನಕ್ಕೆ ನಮ್ಮ ಭಾವಕ್ಕೆ ಅರ್ಥೈಸಿಕೊಳ್ಳುತ್ತಾ ಹೋಗಬಹುದಾದ ಅರ್ಥಗರ್ಭಿತವಾದ ಅಧ್ಯಾಯ.

ಮುಂದೆ, ಈ ಅಧ್ಯಾಯ, ಧ್ಯಾನ ಹೇಗೆ ಮಾಡ್ಬೇಕು, ಯಾವ ಜಾಗದಲ್ಲಿ ಹೇಗೆ ಕೂತ್ಕೋ ಬೇಕು, ಉಸಿರಾಟ, ಪ್ರಾಣಾಯಾಮ ದಬಗ್ಗೆ ಧ್ಯಾನಕ್ಕೆ ಪೂರಕವಾದ ಎಲ್ಲಾ ವಿವರಣೆ ಕೊಡ್ತಾ ಹೋಗುತ್ತೆ, ಧ್ಯಾನದ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸುತ್ತೆ. ಅದಕ್ಕಾಗಿ ನಮ್ಮ ಮನಸ್ಸನ್ನು ಹೇಗೆ ಸಜ್ಜುಗೊಳಿಸಬೇಕು, ನಾವು ಯೋಗಾರೂಢರಾಗಬೇಕಾದರೆ ಏನು ಮಾಡಬೇಕು ಎನ್ನುವುದರ ಪ್ರಸ್ತಾವನೆಯೇ ಮುಂದಿನ ಶ್ಲೋಕ.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ||6.5||

ಅರ್ಥ:(ನಾವು) ನಮ್ಮ ಮನಸ್ಸಿನ ಸಹಾಯದಿಂದಲೇ ನಮ್ಮನು ಉದ್ಧಾರಮಾಡ್ಕೊಬೇಕು. ಅವನತಿಗೀಡು ಮಾಡಿಕೊಳ್ಳದೆ ತನ್ನನ್ನು ಉದ್ಧರಿಸಿಕೊಳ್ಳಬೇಕು. ಯೋಗಿಗೆ ಖಂಡಿತವಾಗಿಯೂ ಮನಸ್ಸೇ ಬಂಧುವೂ, ಶತ್ರುವೂ ಆಗಿದೆ.
ಅಂದರೆ ನಮ್ಮ ಅಧಃಪತನಕ್ಕೂ ಕಾರಣ ಮನಸ್ಸು. ನಮ್ಮ ಉದ್ಧಾರಕ್ಕೂ ಕಾರಣ ಮನಸ್ಸು. ನಮ್ಮ ಆತ್ಮೋದ್ಧಾರ ನಾವೇ ಮಾಡ್ಕೋ ಬೇಕು.

उद्धरेदात्मनात्मानं नात्मानमवसादयेत् |
आत्मैव ह्यात्मनो बन्धुरात्मैव रिपुरात्मन: || 6.5||

uddhared ātmanātmānaṁ nātmānam avasādayet |
ātmaiva hyātmano bandhur ātmaiva ripur ātmanaḥ || 6.5||

Meaning: Lord Sri Krishna says,Elevate yourself through the power of your mind, and not degrade yourself, for the mind can be the friend and also the enemy of the self. Here the Almighty tells us that we are responsible for our upliftment; God and Gurus can show us the path, but we have walk that path.

ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ |
ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ ||6.6||

ಅರ್ಥ: ಯಾರಿಂದ ಮನಸ್ಸನ್ನು ಗೆಲ್ಲಲ್ಪಟ್ಟಿದೆಯೋ ಅವನಿಗೆ (ತನ್ನ ಮನಸ್ಸು) ಬಂಧುವಾಗುತ್ತದೆ. ಹಾಗೆಯೇ ನಿಯಂತ್ರಿಸಲು ವಿಫಲನಾದವನಿಗೆ ಮನಸ್ಸೇ ಶತ್ರುವಾಗುತ್ತದೆ.
ಇಲ್ಲಿ ಆತ್ಮ ಅನ್ನೋ ಪದಕ್ಕೆ ಭಗವಂತ ಅಂತ ಅರ್ಥಮಾಡ್ಕೊಂಡ್ರೆ – ಇನ್ನೊಂದು ಅರ್ಥವನ್ನೂ ಕಾಣಬಹುದು.

ಯಾರು ಭಗವಂತನಲ್ಲಿ ಭಕ್ತಿ ಉಳ್ಳವರಾಗಿ, ಪ್ರೀತಿಗೆ ಪಾತ್ರರಾಗಿದ್ದಾರೋ ಅವರಿಗೆ ಆತ ಬಂಧು. ಯಾರಿಗೆ ಭಗವಂತನಲ್ಲಿ ನಂಬಿಕೆ ಇಲ್ವೋ, ಆತನನ್ನು ದ್ವೇಷಿಸ್ತಾರೋ, ಅವರಿಗೆ ಆತ ಶತ್ರುವಂತೆ ಕಾಣುತ್ತಾನೆ. “ಬಂಧುವಾಗಿ ನನ್ನೊಳಗೆ ಬಂದು ನೆಲೆಸು, ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸು, ಎನ್ನುವ ಪ್ರಾರ್ಥನೆ ನಮ್ಮದಾಗಬೇಕು. ಈ ಭಾವಾರ್ಥವೂ ಚೆನ್ನಾಗಿದೆ ಅಲ್ವ.

बन्धुरात्मात्मनस्तस्य येनात्मैवात्मना जित: |
अनात्मनस्तु शत्रुत्वे वर्ते तात्मैव शत्रुवत् ||6.6||

bandhur ātmātmanas tasya yenātmaivātmanā jitaḥ |
anātmanas tu śhatrutve vartetātmaiva śhatru-vat ||6.6||

Meaning: Lord Sri Krishna emphasizes the importance of controlling the mind: “For those who have conquered the mind, it is their friend. For those who have failed to do so, the mind works like an enemy.


ಶ್ರೀ ಕೃಷ್ಣ ಮುಂದೆ ಹೇಳ್ತಾನೆ –
ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಂ |
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ||6.26||

ಅರ್ಥ:ಚಂಚಲವಾದ ಮತ್ತು ಅಸ್ಥಿರವಾದ ಮನಸ್ಸು ಎಲ್ಲೆಲ್ಲಿ ಅಲೆದಾಡುವುದೋ, ಅದನ್ನು ನಿಯಂತ್ರಿಸಿ ಅಲ್ಲಿಂದ ಆತ್ಮದಕಡೆಗೆ, ನಿಯಂತ್ರಣಕ್ಕೆ ತರಬೇಕು.ನಮ್ಮ ಮನಸ್ಸು ಬಹಳ ಚಂಚಲ. ಒಂದೇಸಲ ನಿಯಂತ್ರಣ ಮಾಡಲು ಆಗಲ್ಲ ಅದು ಎಲ್ಲಕಡೆ ಓಡ್ತಿರುತ್ತೆ. ಅದಕ್ಕೆ ತಡೆ ಹಾಕಿ ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.

यतो यतो निश्चरति मनश्चञ्चलमस्थिरम् |
ततस्ततो नियम्यैतदात्मन्येव वशं नयेत् || 6.26 ||

yato yato niśhcharati manaśh chañchalam asthiram |
tatas tato niyamyaitad ātmanyeva vaśhaṁ nayet || 6.26 ||

Meaning: Lord Sri Krishna says,Whenever and wherever the restless and unsteady mind wanders, one should bring it back and continually focus it on God.

ಇದೆಲ್ಲಾ ಹೇಳೋದು ಸುಲಭ ಮಾಡೋದು ಕಷ್ಟ – ಇದನ್ನೇ ಮುಂದೆ ಅರ್ಜುನ ಕೃಷ್ಣನಿಗೆ ಹೇಳ್ತಾನೆ – ‘ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವತ್ ದೃಢಂ- – -||34||
ಕೃಷ್ಣ! ಮನಸ್ಸು ಖಂಡಿತವಾಗಿಯೂ ಚಂಚಲ, ಉದ್ವಿಗ್ನಗೊಳ್ಳುವಂತಹುದು, ಹಠಮಾರಿಯೂ ಮತ್ತು ಬಲವಾದುದು. ಅದನ್ನು ನಿಗ್ರಹಿಸುವುದು ಗಾಳಿಯನ್ನು ನಿಯಂತ್ರಿಸುವುದಕ್ಕಿಂತಲೂ ಕಷ್ಟಕರವೆಂದು ತೋರುತ್ತದೆ.

ಶ್ರೀ ಕೃಷ್ಣ ನ ಉತ್ತರ ನೋಡಿ –
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಂ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ||35||

ಅರ್ಥ: ಭಗವಂತ ಹೇಳ್ತಾನೆ, ಮಹಾಬಾಹು! ಚಂಚಲವಾದ ಮನಸ್ಸನ್ನು ನಿಗ್ರಹಿಸುವುದು ನಿಸ್ಸಂಶಯವಾಗಿಯೂ ಕಷ್ಟಕರವೇ. ಆದರೆ ಕೌಂತೇಯ! ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ನಿಯಂತ್ರಿಸಬಹುದು. ಪ್ರಯತ್ನ ಪೂರ್ವಕ ಅಭ್ಯಾಸ ಮತ್ತು ವೈರಾಗ್ಯದಿಂದ ಕ್ರಮೇಣ ಇದನ್ನು ಸಾಧಿಸಬಹುದು”. ಪ್ರಯತ್ನ ಪಡಬೇಕು.

Meaning: Lord Krishna said: “O mighty-armed son of Kunti, what you say is correct; the mind is indeed very difficult to restrain. But by practice and detachment, it can be controlled.


ಮತ್ತೆ ಮುಂದಿನ ಶ್ಲೋಕದಲ್ಲಿ ಹೇಳ್ತಾನೆ – ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ | ವಶ್ಯಾತ್ಮನಾ ತು ಯತತಾ ಶಕ್ಯೋsವಾಪ್ತುಮುಪಾಯತಃ (ಶ್ಲೋ. 36)
ಸಂಯಮವಿಲ್ಲದ ಮನಸ್ಸಿನವನಿಂದ ಹೀಗೆ ಆತ್ಮಸಾಕ್ಷಾತ್ಕಾರವನ್ನು ಪಡೆಯುವುದು ಕಷ್ಟಕರ. ಆದರೆ ಯಾರ ಮನಸ್ಸು ನಿಯಂತ್ರಣದಲ್ಲಿರುತ್ತೋ ಅವರು ಪ್ರಯತ್ನಿಸಿದರೆ ಯಶಸ್ಸು ಸಾಧ್ಯ – ಇದು ನನ್ನ ಅಭಿಪ್ರಾಯ ಅಂತ ಹೇಳ್ತಾನೆ.
ಅರ್ಜುನನಿಗೆ ಮತ್ತೊಂದು ಪ್ರಶ್ನೆ ಕಾಡುತ್ತೆ – ಯೋಗಾಭ್ಯಾಸದಲ್ಲಿ ಸ್ವಲ್ಪ ಅಭ್ಯಾಸ ಹಾಕಿ, ಪೂರ್ಣ ಪ್ರಮಾಣದ ಪ್ರಯತ್ನ ನಿಲ್ಲಿಸಿ ಬಿಟ್ರೆ, ಅವರ ಗತಿ ಏನು? (ನಮ್ಗಾಗೋದು ಹಾಗೆ ತಾನೇ?, ಪೂರ್ಣ ಪ್ರಯತ್ನನು ಹಾಕಲ್ಲ, ಏನೋ ಕಾರಣದಿಂದ ನಿಲ್ಸಿ ಬಿಡ್ತೀವಿ, ಮತ್ತೆ ಯಾವಾಗ್ಲೋ ಶುರು ಮಾಡ್ಕೋತೀವಿ)
ಹೀಗೆ ವಿಚಲಿತನಾದ್ರೆ ಉಭಯಭ್ರಷ್ಟನಂತಾಗಲ್ವೆ? ಹೇ ಕೃಷ್ಣ ಇದಕ್ಕೆ ಪರಿಹಾರ ಏನು? (ಶ್ಲೋ. 37 – 39). ಇದಕ್ಕೆಲ್ಲಾ ಭಗವಂತನ ಉತ್ತರ ಮುಂದಿನ ಶ್ಲೋಕಗಳಲ್ಲಿವೆ.

( ನನ್ನ ಅನಿಸಿಕೆ – ಭಗವಂತನ ಧ್ಯಾನ ಮಾಡಿದ್ರೆ ಏನೋ, ಏನೆಲ್ಲಾ ಸಿಕ್ಕಿ ಬಿಡುತ್ತೆ ಅನ್ಕೋಳೋದು ಬೇಡ. ಧ್ಯಾನದಿಂದ ಮನಸ್ಸು ಕೆಟ್ಟದರ ಕಡೆ ಹೋಗಲ್ಲ, ಕೆಟ್ಟಯೋಚನೆ ಬರಲ್ಲ. ಮನಸ್ಸಿನಲ್ಲುಂಟಾಗುವ ಅಶಾಂತಿ, ಕಲ್ಮಶಗಳು ಹೋಗುತ್ತೆ. ಜ್ಞಾನಕ್ಕೂ, ಧ್ಯಾನಕ್ಕೂ, ಕರ್ಮಕ್ಕೂ (ನಮ್ಮ ನಿತ್ಯಕಾಯಕಗಳಲ್ಲಿ) ಇರುವ ಬೆಸುಗೆ ಕಂಡುಕೊಳ್ಳೋಣ. ಸ್ಥಿತಪ್ರಜ್ಞತೆಯಕಡೆ ಸಾಗುವ ಪ್ರಯತ್ನ ನಮ್ಮಲ್ಲಿರಲಿ. ಧ್ಯಾನ, ಜ್ಞಾನ ಅನ್ನೋದು ನಮ್ಮ ತಿಳುವಳಿಕೆ ಅಂದು ಕೋಳೋಣ, ಅದು theory, ಅದರ ಅನುಷ್ಠಾನ,ಕಾರ್ಯ ರೂಪಕ್ಕೆ ತರೋದು ಜ್ಞಾನ ವಿಜ್ಞಾನ ಆಗುತ್ತೆ ( practical), ಇದು ನಮ್ಮ ಕೈಯಲ್ಲಿದೆ. ಪೂರಕವಾಗಿ ಭಗವಂತ ನಮಗೆ ಕೊಟ್ಟಿರುವುದರಲ್ಲಿ ತೃಪ್ತಿ ಕಂಡುಕೊಳ್ಳುವಂತಾಗ ಬೇಕು. ಇನ್ನಷ್ಟು ಮತ್ತಷ್ಟು ಆ ಭಗವಂತ ಅನುಗ್ರಹೀದರೆ ಪಡೆಯೋಣ ಪಡೆಯುವಪ್ರಯತ್ನವನ್ನೂ ಹಾಕೋಣ. ಸಿಕ್ರೆ ಸ್ಸಂತೋಷ ಇಲ್ವೇ ಸಿಕ್ಕಷ್ಟರಲ್ಲೇ ಭಗವಂತನ ಅನುಗ್ರಹ ಆಂದುಕೊಳ್ತಾ ತೃಪ್ತಿ, ಶಾಂತಿ ನಮ್ಮದಾಗಿಸಿಕೊಳ್ಳೋಣ).

ಭಗವದ್ಗೀತೆಯನ್ನು ಭಕ್ತಿಭಾವದಿಂದ ಓದಿ ಅರ್ಥಮಾಡಿಕೊಳ್ಳುವ ಅಭೀಷ್ಟ ನಮ್ಮದಾಗಿರಬೇಕು. ಭಗವಂತ ‘ಬ್ರಹ್ಮಜ್ಯೋತಿ’ – ಅವನ ಜ್ಯೋತಿಯಿಂದ ಜಗತ್ಸೃಷ್ಟಿ.
ಭಗವದ್ಗೀತೆಯ ಎಲ್ಲಾ ಅಧ್ಯಾಯವೂ ಆಧ್ಯಾತ್ಮಿಕ ಜ್ಞಾನ ಭಂಡಾರ.
ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ .
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ
– ಅಂತ ಹೇಳಿದೆ.
ಈ ಅಧ್ಯಾಯದ ಭಾಗವಾಗಿ,
ಯಾರು ಸದಾ ತನ್ನ ಅಂತರಾತ್ಮವನ್ನು ಭಗವಂತನಲ್ಲಿ ನೆಲೆಗೊಳಿಸಿ ಭಕ್ತಿ ಉಳ್ಳವರಾಗಿ, ಭಗವದ್ಚಿಂತನೆಯಲ್ಲಿ ರುತ್ತಾರೋ ಅವರು ಶ್ರೇಷ್ಟರು ಎನ್ನುವ ಭಾವಾರ್ಥಕೊಡುವ ಕೊನೆಯ ಶ್ಲೋಕ (47) ದೊಂದಿಗೆ – ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾ ಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಆತ್ಮಸಂಯಮಯೋಗೋ ನಾಮ ಷಷ್ಠೋ‌sಧ್ಯಾಯಃ

While concluding this Adhyaya on Atma Samyama (Self-Control), the Almighty Sri Krishna underscores the importance of Bhakti (true devotion) and faith and He says Bhakti Yoga is the superior path. Yogis on this path have the power of Divine Love that make them the dearest to the God.


ಓಂ ತತ್ಸತ್ , ” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “

ಈ ಅಧ್ಯಾಯಕ್ಕೆ ಪೂರಕ ಎಷ್ಟೊಂದು ಕಗ್ಗಗಳಿವೆ, ಒಂದನ್ನು ಇಲ್ಲಿ ನೋಡೋಣ –
ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ ।
ಎಣಿಕೆಗಳ ಪೂರಯಿಪ ಸಾಧನಗಳಿಲ್ಲ ॥
ಜನುಮಜನುಮಗಳಿಂತು ಪೇಚಾಟ, ತಿಣಕಾಟ ।
ಮುನಿಪುದಾರಲಿ, ಹೇಳು? – ಮಂಕುತಿಮ್ಮ ॥ ೫೬೮ ॥

ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ಕಾರ್ಯರೂಪಕ್ಕೆ ತರಲು ನಮಗೆ ಅವಶ್ಯಕ ಸಾಧನಗಳಿಲ್ಲ. ಈ ಸಾಧನಗಳ ಅಥವಾ ಉಪಕರಣಗಳ ಕೊರತೆ ನಮಗೆ ಜನ್ಮ ಜನ್ಮಾಂತರದಿಂದಲೂ ಕಾಡುತ್ತಾ ಇದೆ. ಇದರಿಂದ ಪ್ರತೀ ಜನ್ಮದಲ್ಲೂ ನಮಗೆ ತಿಣುಕಾಟ ಮತ್ತು ಪೇಚಾಟಗಳು ಇದ್ದೇ ಇರುತ್ತವೆ. “ಇದು ಹೀಗೆ ಏಕಿದೆ?” ಎಂದು ನಾವು ಯಾರಲ್ಲಿ ದೂರುವುದು? ಎಂದು ತಮ್ಮಲ್ಲಿ ತಾವೇ ಪ್ರಶ್ನಿಸುತ್ತಾರೇ ಮಾನ್ಯ ಡಿ.ವಿ.ಜಿ. ಯವರು.

ಇದರ ಭಾವಾರ್ಥ, ಅಂತರಾರ್ಥ ನಮ್ಮ ಇಂದ್ರಿಯಗಳಿಗೆ, ಮನಸ್ಸಿಗೆ ಪೂರಕವಾಗಿ ಸಾಧನಗಳು, ಉಪಕರಣಗಳು ಅಂದ್ರೆ ಏನು ಅಂತ ನೋಡ್ತಾ ಹೋಗ್ಬೇಕು. ತುಂಬಾ ಅರ್ಥ ಪೂರ್ಣ ಕಗ್ಗ ಅಂತ ನನ್ನ ಭಾವನೆ.

हरिः ॐ

One thought on “BhagavadGita Motivates to Mind the Mind

Leave a comment