BhagavadGita’s Tips to Tame Temptations

Temptation basically means, “an urge to do something that is wrong / unwise.” A more relatable example would be (especially now that we are in holiday season and the New Year is approaching and people getting ready for New Year Resolutions!! :-)) a strong urge to eat a favorite pastry / sweet / dish loaded with ‘not-so-healthy’ calories!!

Temptation can be of many forms: Craving for food / clothes / binge-watching TV shows / over-indulging in social media etc.

When we let our sense organs go astray and let our mind rule over intellect, we give in to these temptations. Indulging in these will give temporary happiness, but hurts in the long-run.

Most of us have read about the famous Marshmallow experiment conducted by an American-Austrian psychologist, Walter Mischel at Stanford University about delayed gratification. This experiment showed that the kids who resisted the temptation for eating marshmallows right away had fewer behavioral problems and better life style when they grew up.

A few ways to control temptations are:

  • Think of the consequences if given into a temptation
  • When tempted, divert the mind to a constructive option (e.g., when you want to eat a fruit-cake, get yourself a bowl of freshly cut fruits)
  • Instead of full-control, allow a little. Have achievable goals and prove it to yourself you can do it (E.g., if you are spending Rs. 5000 every month on clothes & accessories, you may not be able to stop right-away; allow yourself to spend Rs. 500 for these items and taper off the amount spent slowly).

The classic image that we all get in our mind when we hear the word, “Bhagavad Gita” is symbolic of reining in our senses and controlling our mind. Lord Sri Krishna gives us effective tips to control our senses and mind.

Let us delve into the blog by our respected Sri. RamaMurthy; he explains the Gita’s verses relevant to this topic along with Dr. D.V.G.’s MankuTimmana Kagga.

(NOTE: This blog post is part of a series; please refer to BhagavadGita, The Solution Provider to access the complete series.)

” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮಃ: “

  • i . ಅಧ್ಯಾಯ 2 ಸಾಂಖ್ಯ ಯೋಗ, ಶ್ಲೋಕ 60, 61, & 70 (Shloka # 60, 61, & 70 of Adhyaya 2, “Sankhya Yoga”)
  • ಅಧ್ಯಾಯ 7, ಜ್ಞಾನವಿಜ್ಞಾನ ಯೋಗ, ಶ್ಲೋಕ 14 (Shloka # 14 of Adhyaya 7, “Jnana Vijnana Yoga”)

i . ಅಧ್ಯಾಯ 2 ಸಾಂಖ್ಯ ಯೋಗ, ಶ್ಲೋಕ 60, 61, & 70 (Shloka # 60, 61, & 70 of Adhyaya 2, “Sankhya Yoga”)

ಈ ಅಧ್ಯಾಯದ ಮುಖ್ಯ ಭಾಗ “ಸ್ಥಿತಪ್ರಜ್ಞನ ಲಕ್ಷಣ”. – ಇದರ ವಿವರಣೆ ಶ್ಲೋಕ 55 ರಿಂದ ಕೊನೆಯ 72ನೇ ಶ್ಲೋಕದವರೆಗೂ ಇದೆ. ಇದು, ಎಲ್ಲರಿಗೂ ಎಲ್ಲ ಕಾಲಕ್ಕೂ ಪ್ರಸ್ತುತ ಯಾಕೆ ಅಂದ್ರೆ, ನೋಡಿ ‘ಮನುಷ್ಯ’ ನಲ್ಲಿ ಎಷ್ಟೊಂದು ಅಂಶಗಳು, ಗುಣಗಳು ತುಂಬಿಕೊಂಡು ಬಿಟ್ಟಿದೆ. ಕರ್ಮಾಂಗಗಳು , ಜ್ಞಾನೇಂದ್ರಿಯಗಳು, ಮನಸು ಬುದ್ಧಿ ಮುಂತಾದ ಅಂತಃಕರಣಗಳು, ಜೊತೆಗೆ ಪೂರ್ವಕರ್ಮಶೇಷಗಳು, ವಾಸನಾವೃತ್ತಿಗಳು ಎಲ್ಲಾ ಸೇರಿಕೊಂಡಿವೆ. ಇವೆಲ್ಲಾ ವಿವಿಧ ಪ್ರಮಾಣಗಳಲ್ಲಿ ನಮ್ಮನ್ನ ಆಟ ಆಡಿಸ್ತಾ, ನಾವು ಸುಖ, ದುಃಖ ಪಡುವಂತೆ ಮಾಡ್ತಿರುತ್ತವೆ. ಆದ್ರಿಂದ ಆತ್ಮಾನಾತ್ಮ ವಿವೇಕ ನಮ್ಮಲ್ಲಿ ಸ್ಫುರಿಸಬೇಕು ಮತ್ತು ಸ್ಥಿತಪ್ರಜ್ಞ ತತ್ವ ಅರ್ಜುನನಿಗಷ್ಟೇ ಅಲ್ಲ ಎಲ್ಲರಿಗೂ ಆವಶ್ಯ .
ನಮ್ಮ ಮುಂದಿರುವ ಮೂರೂ ಶ್ಲೋಕಗಳು , ಸ್ಥಿತಪ್ರಜ್ಞನ ಲಕ್ಷಣಗಳನ್ನ ಹೇಳುತ್ತವೆ. –

ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ |
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ||2.60||

ಅರ್ಥ :
“ಕೌಂತೇಯ! ವಿವೇಕಿಯಾದ ಪುರುಷನು ಇಂದ್ರಿಯಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದರೂ ಈ ಇಂದ್ರಿಯಗಳು ಬಲವಂತವಾಗಿ ಸೆಳೆಯುತ್ತಿರುತ್ತವೆ.

यततो ह्यपि कौन्तेय पुरुषस्य विपश्चित: |
इन्द्रियाणि प्रमाथीनि हरन्ति प्रसभं मन: || 2.60 ||

yatato hyapi kaunteya puruṣhasya vipaśhchitaḥ |
indriyāṇi pramāthīni haranti prasabhaṁ manaḥ || 2.60 ||

Meaning: Lord Sri Krishna tells Arjuna, “The senses are so strong and turbulent, O son of Kunti, that they can forcibly carry away the mind even of a person endowed with discrimination and practicing self-control. He acknowledges that controlling the senses is quite a challenging task. He gives how to achieve self-control in the next Shlokas / verses.

ಇಂದ್ರಿಯ ನಿಗ್ರಹ ಮಾಡ್ಬೇಕು ಅಂತ ಹೇಳೋದು ಸುಲಭ ಆದ್ರೆ ಕಷ್ಟ ಸಾಧ್ಯ. . ಈ ಇಂದ್ರಿಯಗಳು ಸುಮ್ನಿರಲ್ಲ. ಏನೆಲ್ಲಾ, ಕಂಡಿದ್ದು ಕೇಳಿದ್ದು ಎಲ್ಲವನ್ನು ತಂದು ತಂದು ಮನಸ್ನಲ್ಲಿ ತುಂಬ್ತಿರುತ್ತೆ. ಮನಸ್ಸನ್ನ ಗೊಂದಲಗೊಳಿಸ್ತಾ, ಸಂಶಯ ಹುಟ್ಟಿಸ್ತಾ ದಾರಿ ತಪ್ಪಿಸ್ತಾನೆ ಇರುತ್ವೆ. ಎಲ್ಲರನ್ನೂ ಈ ಸಮಸ್ಯೆ ಕಾಡದೇ ಬಿಡಲ್ಲ.ಯಾವುದನ್ನ ಮಾಡ್ಬೇಕು ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಈ ಸಮಸ್ಯೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಸರಳ ಪರಿಹಾರ ಹೇಳ್ತಾನೆ. .
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ |
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||2.61||

ಅರ್ಥ :
“ಯಾರು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿ, ತನ್ನಅಧೀನದಲ್ಲಿಟ್ಟುಕೊಂಡು ನನ್ನಲ್ಲಿ ಮನವಿಡುವನೋ ಅವನು ಸ್ಥಿರಪ್ರಜ್ಞೆಯವನು.

तानि सर्वाणि संयम्य युक्त आसीत मत्पर: |
वशे हि यस्येन्द्रियाणि तस्य प्रज्ञा प्रतिष्ठिता || 2.61 ||

tāni sarvāṇi sanyamya yukta āsīta mat-paraḥ |
vaśhe hi yasyendriyāṇi tasya prajñā pratiṣhṭhitā || 2.61 ||

Meaning: Lord Sri Krishna says, “They are established in perfect knowledge, who subdue their senses and keep their minds ever absorbed in me. Here, the Almighty is telling us to focus our mind on Him. Our mind is like a monkey; it goes after whatever thought it gets. It is our job to give our mind a constructive thought on think about!

To drive home the point, Sri Krishna explains how giving into desires lead to self-destruction: Brooding on the Objects of Senses ►Attachment ►Desire ►Anger ►Delusion ►Loss of Memory ►Loss of Reasoning Ability ►Utter Ruin

ಇಂದ್ರಿಯಗಳಿಂದ ಮನಸ್ಸು ಗೊಂದಲಗೊಳ್ಳುವುದು, ಅಥವಾ ಮನಸ್ಸಿನಿಂದ ಇಂದ್ರಿಯ ಬೇಡದ ಕಾರ್ಯಗಳಲ್ಲಿ ತೊಡಗಿಸುವುದು ಎಲ್ಲರನ್ನೂ ಕಾಡುವ ಸಮಸ್ಯೆ.
ಈ ಸಮಸ್ಯೆಯಿಂದ ಹೊರ ಬರಬೇಕಾದರೆ ನಾವು ಇಂದ್ರಿಯಗಳನ್ನ ನಿಗ್ರಹಿಸ್ತಾ ನಾವು ಭಗವಂತನಲ್ಲಿ ಶರಣಾಗಬೇಕು. ನಮ್ಮ ಪ್ರಾರ್ಥನೆ “ನನ್ನ ಇಂದ್ರಿಯಗಳು ದಾರಿತಪ್ಪದಂತೆ ಅನುಗ್ರಹಿಸು, ನಿನ್ನಲ್ಲೆ ನನ್ನ ಮನಸ್ಸನ್ನ ಉಳಿಯುವಂತೆ ಅನುಗ್ರಹಿಸು” ಅಂತಾಗಬೇಕು.

ನಮ್ಮ ಅಧಃಪತನಕ್ಕೆ ನಮ್ಮ ಮನಸ್ಸು ಹೇಗೆ ಕಾರಣವಾಗಬಹುದು, ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ತುಂಬಾ ಅರ್ಥಗರ್ಭಿತವಾದ ಶ್ಲೋಕಗಳು ಹಾಗೂ ಎಲ್ಲರಿಗೂ ಪರಿಚಿತ -. ಅದನ್ನೂ ನೋಡೋಣ.

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥ 2.62 ॥
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥ 2.63 ॥

ಮುಂದಿನ ಶ್ಲೋಕ –
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ |
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ||2.70||

ಅರ್ಥ :
“ಸದಾ (ನದಿಗಳ) ನೀರು ಪ್ರವೇಶಿಸಿ ತುಂಬುತ್ತಿದ್ದರೂ ಹೇಗೆ ಸಮುದ್ರವು ಶಾಂತವಾಗಿರುವುದೋ ಹಾಗೆಯೇ ಯಾವಾಗಲೂ ಹರಿದು ಬರುವ ಆಸೆಗಳು ಪ್ರವೇಶಿಸಿದರೂ ಸ್ಥಿರಮನಸ್ಕನಾದವನು ಮಾತ್ರವೇ ಶಾಂತಿಯನ್ನು ಸಾಧಿಸಬಲ್ಲ. ಇಂತಹ ಆಸೆಗಳನ್ನು ತೀರಿಸಿಕೊಳ್ಳಲು ಶ್ರಮಿಸುವವನಿಗೆ ಶಾಂತಿ ದೊರೆಯಲಾರದು.”

ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಅಂದ್ರೆ, ಆತನ ಮನಸ್ಸು ಕಿರು ತೊರೆಗಳಂತೆ ಇರದೆ, ಸಮುದ್ರದಂತಿರುತ್ತೆ. ಸಮುದ್ರ ಹೇಗೆ ಎಲ್ಲಾ ನದಿಗಳು ಬಂದು ಸೇರಿದರೂ ಮಳೆ ಬಂದಾಗಲೂ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲವೋ. (ಇದನ್ನ ‘ಸಮುದ್ರ ಮರ್ಯಾದೆ” ಅಂತ ಹೇಳ್ತಾರೆ). ಅದೇ ರೀತಿ ಸಾಧಕ. ಪ್ರಪಂಚದ ಎಲ್ಲಾ ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ಆತ ವಿಚಲಿತನಾಗದೇ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನಿಗೆ ನಿಜವಾದ ಸುಖ ಶಾಂತಿ ಸಿಗೋದಿಲ್ಲ.

आपूर्यमाणमचलप्रतिष्ठं
समुद्रमाप: प्रविशन्ति यद्वत् |
तद्वत्कामा यं प्रविशन्ति सर्वे
स शान्तिमाप्नोति न कामकामी || 2.70 ||

āpūryamāṇam achala-pratiṣhṭhaṁ
samudram āpaḥ praviśhanti yadvat |
tadvat kāmā yaṁ praviśhanti sarve
sa śhāntim āpnoti na kāma-kāmī || 2.70 ||

Meaning: Lord Sri Krishna says, Just as the ocean remains undisturbed by the incessant flow of waters from rivers merging into it, likewise the sage who is unmoved despite the flow of desirable objects all around him attains peace, and not the person who strives to satisfy desires.

ii. ಅಧ್ಯಾಯ 7, ಶ್ಲೋ. 14
ಜ್ಞಾನ ವಿಜ್ಞಾನಯೋಗವನ್ನು ಪರತತ್ವಜ್ಞಾನ ಅಂತ ಹೇಳುವುದೂ ಇದೆ.

ಹಿಂದಿನ ಅಧ್ಯಾಯಗಳಲ್ಲಿ, ನಾವು ಯಾವರೀತಿ ಸಾಧನೆಗೆ ತೊಡಗಬೇಕು – ಕರ್ಮದ ಬಗ್ಗೆ, ಧ್ಯಾನದ ಬಗ್ಗೆ ತಿಳಿಸುತ್ತಾ ಹೋಗಿದೆ. ಈ ಅಧ್ಯಾಯದಲ್ಲಿ ಜ್ಞಾನ ಅಂದ್ರೆ ಏನು, ವಿಜ್ಞಾನ ಅಂದ್ರೆ ಏನು ಅಂತ ತಿಳಿಸ್ತಾ ಸಾಧನೆಯಿಂದ ನಾವು ಹೇಗೆ ಭಗವಂತನನ್ನು ತಿಳಿದುಕೊಳ್ಳಬಹುದು ಎಂಬ ವಿಸ್ತೃತ ರೂಪ ಇಲ್ಲಿದೆ. ನಾವು ಬದುಕುತ್ತಿರುವ ತ್ರಿಗುಣಾತ್ಮಕ (ಸಾತ್ವಿಕ, ರಾಜಸ,ತಾಮಸ) ಪ್ರಪಂಚದಿಂದ ಹೇಗೆ ಹೊರಬರಬಹುದು, ಸಜ್ಜನರ ದುರ್ಜನರ ವಿಶ್ಲೇಷಣೆ ಹೀಗೆ ಎಲ್ಲವನ್ನೂ ಬಿಚ್ಚಿಡುತ್ತಾ ಆಧ್ಯಾತ್ಮವಿಜ್ಞಾನವನ್ನು ವಿವರಿಸ್ತಾ ಹೋಗುತ್ತದೆ.

ಮೊದಲನೇ ಶ್ಲೋಕ – ಮಯ್ಯಾಸಕ್ತಮನಾಃ ಪಾರ್ಥ.. ನನ್ನಲ್ಲಿಯೇ ಮನಸ್ಸಿಟ್ಟು ಶರಣಾಗತಿ ಭಾವದಿಂದಿರುವುದಾದರೆ, ಸರಿಯಾದ ರೀತಿಯಲ್ಲಿ ಸಂಶಯವಿಲ್ಲದೆ ನನ್ನನ್ನು ನೀನು ತಿಳಿದುಕೊಳ್ಳಬಹುದು, ವಿವರಿಸ್ತೀನಿ ಕೇಳು ಎಂಬ ಲ್ಲಿಂದ ಶುರುವಾಗುತ್ತಹೋಗುತ್ತೆ.
ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳೀದಂತಾಗುತ್ತೋ ಅದನ್ನ ನಿನಗೆ ಹೇಳ್ತೀನಿ ಅಂತ ಈ ಅಧ್ಯಾಯ ಮುಂದುವರೆಯುತ್ತೆ. ಜ್ಞಾನ ಅಂದ್ರೆ ಅರಿವು, ತಿಳುವಳಿಕೆ, ಮನದ ಒಳ ಚಿಂತನೆ ಹೀಗೆ ಅರ್ಥೈಸಿಕೊಳ್ಳಬಹುದು, ಇಲ್ಲಿ ಜ್ಞಾನ ಅಂದ್ರೆ ಭಗವಂತನನ್ನು ತಿಳಿಯುವುದು ಜ್ಞಾನ. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳದಂತಾಗುತ್ತೋ ಅದು ವಿಶಿಷ್ಟವಾದ ಜ್ಞಾನ, ವಿಜ್ಞಾನ.
ಭಗವಂತನನ್ನು ಅರಿತುಕೊಳ್ಳುವ ವಿಶಿಷ್ಟ ಜ್ಞಾನವನ್ನು – ಇಲ್ಲಿ ಹೇಳುತ್ತೆ. ಜ್ಞಾನ ವಿಜ್ಞಾನ ಇವೆರಡರ ಸಂಯೋಗದಿಂದ ಭಗವಂತನ ದರ್ಶನ, ಅನುಭವ ಸಾಧ್ಯ ಎಂಬುದನ್ನು ಮುಂದೆ ವಿವರಿಸುತ್ತೆ. ನಮಗೆ ಗೊತ್ತಿರೋದ್ರಿಂದ (ಅರಿವು), ಗೊತ್ತಿಲ್ಲದ ಕಡೆಗೆ (ಭಗವಂತನ ಅರಿವು) ಹೋಗುವುದೇ ಆಗಿದೆ ಅನ್ಕೋಬಹುದೇನೋ?.

ಹಾಗೆಯೇ, ಪ್ರಕೃತಿ ಬಗ್ಗೆ 5ನೇ ಶ್ಲೋಕದಲ್ಲಿ ಹೇಳಿದೆ. ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಂ . . . ಶ್ಲೋ. 5. ಪ್ರಕೃತಿಯಲ್ಲಿ ಎರಡು ವಿಧಗಳನ್ನ ಹೇಳ್ತಾರೆ. ಅಪರಾ ಪ್ರಕೃತಿ, ಪರಾಪ್ರಕೃತಿ. ಆಪರಾ ಪ್ರಕೃತಿ – ಇದು ಲೌಕಿಕ, ಇಂದ್ರಿಯ ಗೋಚರ, ನಮ್ಮಲ್ಲಿರುವ ಎಂಟು ಗುಣಗಳಿಂದ (ಪಂಚೇಂದ್ರಿಯಗಳು ಮತ್ತು ಬುದ್ಧಿ, ಮನಸ್ಸು, ಅಹಂಕಾರ ಗುಣಗಳನ್ನು ಸೇರಿಸಿಕೊಂಡು) ಅನುಭವಪಡಬಹುದಾದಂಥದ್ದು. ಅಪರಾ ಪ್ರಕೃತಿ ಇದರ ವಿರುದ್ಧ. ಇದನ್ನ ಚೇತನ ಅನ್ನಬಹುದು (inner spiritual). ಮನೆಯಲ್ಲಿ switch ಹಾಕಿದ್ರೆ, bulb ಹತ್ತೋದು ನಮಗೆ ಗೋಚರ, ಅದರ ಚೇತನ ವಿದ್ಯುತ್ಶಕ್ತಿ ಕಾಣಸೋಲ್ವಲ್ಲ ಹಾಗೆ. ಬರೀ bulb ಇದ್ರೂ ಪ್ರಯೋಜನವಿಲ್ಲ, ಬರೀ ವಿದ್ಯುತ್ಶಕ್ತಿ ಇದ್ರೂ ಪ್ರಯೋಜನವಿಲ್ಲ. ಹಾಗೆಯೇ ಅಪರ, ಪರ ಎರಡೂ ಸೇರಿ ಪ್ರಕೃತಿ – ಹಾಗೂ ಈ ಜಗತ್ತು ನಡೀತಿದೆ ಅನ್ನೋದರ ಮನವರಿಕೆ ಇಲ್ಲಿ ಆಗುತ್ತೆ. ಲೌಕಿಕ, ಇಂದ್ರಿಯ ಗೋಚರವಾದ ಪ್ರಪಂಚವೊಂದಿದೆ, ಅದರಲ್ಲಿ ನಾವಿದ್ದೇವೆ ಇದನ್ನೆಲ್ಲಾ ಮುನ್ನಡೆಸುತ್ತಿರುವ ಒಂದು ಶಕ್ತಿ ಇದೆ ಅಂತಾದರೆ ಅದು ಪರಬ್ರಹ್ಮ .
ಹಾಗೆಯೇ ಸೃಷ್ಟಿ ಸ್ಥಿತಿ ಲಯಗಳಿಗೂ ನಾನೆ ಕಾರಣ ಅಂತ ಶ್ರೀ ಕೃಷ್ಣ ಹೇಳ್ತಾನೆ. (ಶ್ಲೋ. 6)

ನಾವು ಸಾಮಾನ್ಯವಾಗಿ ನಾಲ್ಕು ಥರದ ಜನರನ್ನ ಕಾಣ್ತೀವಿ (ಶ್ಲೋ. 16) 1. ಆರ್ತರು – ಇವರು ಭಯದಿಂದಲೋ,ಏನೋ ತೊಂದ್ರೆ ಬಂದಾಗ ಭಗವಂತನನ್ನ ಜ್ನಾಪಿಸ್ಕೊಳ್ತಾರೆ, ಸಂಕಟಬಂದಾಗ ವೆಂಕಟರಮಣ ಅನ್ನೋಹಾಗೆ. 2. ಜಿಜ್ಞಾಸುಗಳು/ಶಾಸ್ತ್ರಾರ್ಥಿಗಳು. – ಇವರು ಎಲ್ಲವನ್ನೂ ಪರೀಕ್ಷಿಸಿ ನೋಡುವ ಜ್ಞಾನ ಕುತೂಹಲ ಇವರದ್ದು, ವಿಚಾರ ಶೀಲರು. 3. ಲಾಭಾಸಕ್ತರು ಅರ್ಥಾರ್ಥಿಗಳು ಅನ್ಬಹುದು . ಇವ್ರು ಒಂಥರಾ ನಾಸ್ತಿಕರು. ದುಡ್ಡೇ ದೊಡ್ಡಪ್ಪ ಇವ್ರಿಗೆ. ಪ್ರಾಪಂಚಿಕ ಸುಖ ಮುಖ್ಯವಾದವರು. 4. ಜ್ಞಾನಿಗಳು. – ಇವರು ಸಾರ್ಥಕರೂ,ತತ್ವಾನುಭವಿಗಳು. ಶ್ಲೋಕ 16, 17 ಹಾಗೂ ಮುಂದಿನಶ್ಲೋಕಗಳಲ್ಲಿ ವಿವರಣೆಯನ್ನು ಕಾಣಬಹುದು. ಎಲ್ಲಾ ಶ್ಲೋಕಗಳೂ ಜ್ಞಾನವಿಜ್ಞಾನವೆ. ಪ್ರತಿಯೊಂದು ಶ್ಲೋಕವೂ ಅರ್ಥಪೂರ್ಣ. ಓದ್ತಾ ಓದ್ತಾ ನಮ್ಮ ನಿತ್ಯಜೀವನಕ್ಕೆ ನಮ್ಮ ಭಾವಕ್ಕೆ ಅರ್ಥೈಸಿಕೊಳ್ಳುತ್ತಾ ಹೋಗಬಹುದಾದ ಅರ್ಥಗರ್ಭಿತವಾದ ಅಧ್ಯಾಯ.

ಶ್ಲೋಕ 14.

ಹಿಂದಿನ ಶ್ಲೋಕದಲ್ಲಿ (13) – ಇಡೀ ಜಗತ್ತು ತ್ರಿಗುಣಗಳಿಂದಾಗಿ ಭ್ರಮೆಯಿಂದ ಕೂಡಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತನಾದ, ಅವ್ಯಯರೂಪನಾದ ಭಗವಂತನನ್ನು ತಿಳಿಯಲು ಸಾಧ್ಯವಿಲ್ಲ ಅಂತ ಹೇಳಿದೆ. ಭಗವಂತನನ್ನು ತಿಳಿಯ ಬೇಕಾದರೆ ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಹೇಗೆ ? ಉತ್ತರವೇ ನಮ್ಮ ಮುಂದಿನ ಶ್ಲೋಕ.

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ |
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ||7.14||

ಅರ್ಥ : “ಭೌತಿಕ ಪ್ರಕೃತಿಯ ತ್ರಿಗುಣಗಳಿಂದಾದ ನನ್ನ ಈ ದೈವೀ ಮಾಯೆಯನ್ನು ದಾಟುವುದು ಕಷ್ಟಕರ. ಯಾರು ನನಗೆ ಶರಣಾಗತರಾಗುತ್ತಾರೋ ಅವರು ಈ ಮಾಯೆಯಿಂದ ಖಂಡಿತವಾಗಿಯೂ ದಾಟಬಲ್ಲರು.”

ಇಡೀ ಜಗತ್ತನ್ನು ನಿಯಂತ್ರಿಸಬಲ್ಲ ಮಹಾ ಶಕ್ತಿಸ್ವರೂಪ ಆ ಮಾಯೆ ಇದು ಭಗವಂತನ ಅಧೀನ. ನಾವು ಭಗವಂತನನ್ನು ಕಾಣಬೇಕಾದರೆ ಈ ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಕಾಣುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಹಾಗಾದ್ರೆ, “ಎಲ್ಲರೂ ಏಕೆ ಭಗವಂತನಲ್ಲಿ ಶರಣಾಗುವುದಿಲ್ಲ? ಕೆಟ್ಟತನ ಜನರಲ್ಲಿ ಹೇಗೆ ಬರುತ್ತದೆ?” ಇದಕ್ಕೆ ಉತ್ತರರೂಪವಾಗಿ ಮುಂದಿನ ಶ್ಲೋಕದಲ್ಲಿ ಅಸುರೀಗುಣ ಪೂರಿತರಾದವರು, ಮಾಯೆಯಿಂದ ಆವೃತವಾಗಿರುವುದರಿಂದ ಹಾಗೆಯೇ ಅವರು ಅಸುರಿ ಸ್ವಭಾವ ಮತ್ತು ಅಸುರೀ ವೃತ್ತಿಯನ್ನೇ ಅವಲಂಬಿಸಿರುತ್ತಾರೆ ಎಂದು ಹೇಳಿದೆ.

दैवी ह्येषा गुणमयी मम माया दुरत्यया |
मामेव ये प्रपद्यन्ते मायामेतां तरन्ति ते || 7.14 ||

daivī hyeṣhā guṇa-mayī mama māyā duratyayā |
mām eva ye prapadyante māyām etāṁ taranti te || 7.14 ||

Meaning: Lord Sri Krishna says that one can overcome the Maya / worldly temptations by surrendering to Him, “My divine energy Maya, consisting of the three modes of nature, is very difficult to overcome. But those who surrender unto me cross over it easily.

ಓಂ ತತ್ಸತ್ , “ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “

ಈ ಅಧ್ಯಾಯಕ್ಕೆ ಬರುವ ಒಂದು ಪೂರಕ ಕಗ್ಗ –

ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ॥
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ – ಮಂಕುತಿಮ್ಮ ॥ ೧೦೭ ॥

ನಮ್ಮ ಅರಿವಿಗಿಲ್ಲದ್ದು, ಗೊತ್ತಿಲದ್ದು, ತಿಳಿಯದಿರುವುದು ಎಂದು “ನಾಸ್ತಿಕ” ದೇವರನ್ನು ನಂಬುವುದಿಲ್ಲ. ಅವನಿಗೆ ದೇವರಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವನಿಗೆ ಗೋಚರವಾಗುವುದಿಲ್ಲ ಮತ್ತು ಅನುಭವಕ್ಕೂ ಬರುವುದಿಲ್ಲ. ಆದರೆ ಅದರ ಅರಿವಿಲ್ಲದಿದ್ದರೂ ಅದರಲ್ಲಿ ನಂಬಿಕೆ ಇಟ್ಟಿರುವವನು ಭಕ್ತ. ಇರಲಿ ನಾನು ಇದನ್ನು ವಿಚಾರಕ್ಕೆ ಒರೆ ಹಚ್ಚಿ ನಿರ್ಣಯಿಸಬೇಕು,ಪರಿಕಿಸಿ ನೋಡಬೇಕು ಎಂದು ಹೇಳುವವನೇ ವಿಜ್ಞಾನಿ. ನಂಬಿದ್ದನ್ನು ಅಂತರ್ಯದಲ್ಲಿ ಚಿಂತನ, ಮನನ , ಧ್ಯಾನ , ತಪಸ್ಸು ಮಾಡಿ ಆ ಪರಮಾತ್ಮ ವಸ್ತುವನ್ನು ಅರಿತುಕೊಳ್ಳಲು ಪ್ರಯತ್ನಪಡುವವನೆ ಮುನಿ ಅಥವಾ ಋಷಿ ಎಂದು ಹೇಳಿದ್ದಾರೆ ಮಾನ್ಯ ಡಿ.ವಿ.ಜಿ. ಯವರು.

One thought on “BhagavadGita’s Tips to Tame Temptations

Leave a comment