BhagavadGita’s Solution for Dealing with Envy

Envy is a negative feeling or emotion that one could experience over something he / she doesn’t have. It could be about a material possession like a house / vehicle / money. Envy (Matsarya in Samskrita) is also considered to be one of the Six Enemies of the mind.

This has increased even more with the proliferation of social media apps. Watching someone’s vacation photos or a new home could lead to envious feelings, affecting one’s self-esteem and relationships. Whether those things are required in one’s life or not, tendency to acquire those things increases leading to a perpetual catch-up vicious cycle!!

If Envy is be replaced with a sense of gratitude and measures to cultivate and nurture positive thoughts are taken, we are living a contented life.

BhagavadGita provides us with ways to deal with envy. Let us learn about these from the following article by Sri. RamaMurthy. (NOTE: This blog post is part of a series; please refer to BhagavadGita, The Solution Provider to access the complete series.)

DEALING WITH ENVY

ಅಧ್ಯಾಯ 12 ಭಕ್ತಿಯೋಗ, ಶ್ಲೋ. 13, 14

“ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥13॥

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ” ॥14॥

अद्वेष्टा सर्वभूतानां मैत्र: करुण एव च |
निर्ममो निरहङ्कार: समदु:खसुख: क्षमी || 12.13||
सन्तुष्ट: सततं योगी यतात्मा दृढनिश्चय: |
मय्यर्पितमनोबुद्धिर्यो मद्भक्त: स मे प्रिय: ||12.14||

adveṣhṭā sarva-bhūtānāṁ maitraḥ karuṇa eva cha |
nirmamo nirahankāraḥ sama-duḥkha-sukhaḥ kṣhamī || 12.13||

santuṣhṭaḥ satataṁ yogī yatātmā dṛiḍha-niśhchayaḥ |
mayy arpita-mano-buddhir yo mad-bhaktaḥ sa me priyaḥ ||12.14||

ಭಗವದ್ಗೀತೆಯ ಹನ್ನೆರಡನೇ ಅಧ್ಯಾಯವಾದ ‘ಭಕ್ತಿಯೋಗ’ದಲ್ಲಿ ನಮಗೆ ಕಂಡುಬರೋದು – ಇಂದ್ರಿಯಶುದ್ಧಿ ಹೇಗೆ ಮಾಡ್ಕೋಬೇಕು, ಪರಮಾತ್ಮನನ್ನ ಸಾಕಾರರೂಪದಲ್ಲಿ ಅಥವಾ ನಿರಾಕಾರರೂಪದಲ್ಲಿ ಹೇಗೆ ನಮ್ಮ ಧ್ಯಾನ ಪೂಜಾದಿಗಳನ್ನ ಸಲ್ಲಿಸಬಹುದು, ಹೇಗೆ ಸಿದ್ಧಿಸಿಕೊಳ್ಳಬಹುದು ಹಾಗೂ ನಮ್ಮ ಭಕ್ತಿ ಅನ್ನಿ, ಪೂಜೆ ಅನ್ನಿ ಯಾವರೀತಿ ಮಾಡ್ದಾಗ ಭಗವದ್ಕೃಪೆಗೆ ಪಾತ್ರರಾಗಬಹುದು ಅನ್ನುವ ವಿಚಾರ, ವಿವರಣೆಗಳು. ಸಂಪೂರ್ಣ ಗೀತಾಪಠಣ / ಶ್ರವಣ ಸಾಧ್ಯವಾಗದ ಪಕ್ಷದಲ್ಲಿ, ೨೦ ಶ್ಲೋಕಗಳ ಈ ಚಿಕ್ಕ ಆಧ್ಯಾಯವನ್ನಾದರೂ ಮನೋಗತ ಮಾಡಿಕೊಳ್ಳಬಹುದು.
ನಮ್ಮ ಅಸೂಯೆಗೆ, ದ್ವೇಷಕ್ಕೆ ಇಂಥದೇ ಕಾರಣ ಬೇಕು ಅಂತಿಲ್ಲ. ಅಸಹನೆಯೂ, ಹೊಟ್ಟೆಕಿಚ್ಚು ಅಂತೀವಲ್ಲ ಅದೂ ಆಗಬಹುದು. ನಮಗೆ ದ್ವೇಷ ಅನ್ನೋದು ಯಾವಾಗ, ಯಾಕೆ ಬರುತ್ತೆ – ಒಂದು ಒಳ್ಳೆಯವರನ್ನು (ಅವರ ಒಳಿತನ್ನು, ಉತ್ಕರ್ಷವನ್ನು, ಕೀರ್ತಿ ಇತ್ಯಾದಿಗಳನ್ನ ಕಂಡು) ದ್ವೇಷಿಸುವುದು; ಇನ್ನೊಂದು ಕೆಟ್ಟವರನ್ನು (ಅವರ ದುಷ್ಕೃತ್ಯಗಳನ್ನ, ಕೆಟ್ಟತನವನ್ನು ಕಂಡು) ದ್ವೇಷಿಸುವುದು.
ನಾವು ಪ್ರಸ್ತಾಪಿಸುತ್ತಿರುವ ಶ್ಲೋಕದ ಕಡೆ ಗಮನ ಹರಿಸಿದ್ದೇ ಆದರೆ, ಶ್ರೀ ಕೃಷ್ಣ ವಿವರಿಸುತ್ತಾ –
ನಮ್ಮಲ್ಲಿ ಮೊದಲನೆಯದಾಗಿ ಇರಬೇಕಾದ ಗುಣ “ಅದ್ವೇಷ್ಟಾ ಸರ್ವಭೂತಾನಾಂ”. . . . . .ಯಾರನ್ನೂ ದ್ವೇಷಿಸದಿರುವುದು, ಆಮೇಲೆ ಎಲ್ಲ ಜೀವಿಗಳಲ್ಲೂ, ಎಲ್ಲರಲ್ಲೂ ಸ್ನೇಹ, ಕರುಣೆ ಹೊಂದಿರುವನೋ, ನಾನು-ನನ್ನದು ಅನ್ನೋ ಅಹಂಕಾರ ಇಲ್ಲದವನು ಸುಖ ದುಃಖಗಳಲ್ಲಿ ಸಮ ಚಿತ್ತತೆ, ಕ್ಷಮಾಶೀಲತೆ ಹಾಗೂ
ಸಂತುಷ್ಟಃ ಸತತಂ ಯೋಗೀ . . . . ಸದಾ ಸಂತೃಪ್ತಿ, ಆತ್ಮ ಸಂಯಮೀ, ಧೃಡಚಿತ್ತತೆ, ಮನಸ್ಸು, ಬುದ್ಧಿ ಗಳನ್ನ ಭಗವಂತನಲ್ಲಿ ನೆಲೆಗೊಳಿಸುವುದು

ಈ ಗುಣ ಗಳನ್ನು ನಮ್ಮದಾಗಿಸಿಕೊಂಡ್ರೆ, ಎಲ್ಲರಿಗೂ ಪ್ರೀತಿಪಾತ್ರರಾಗ್ತೀವಿ, ಅಷ್ಟೇ ಏಕೆ ಭಗವಂತನಿಗೂ ಕೂಡ.

ಜೀವನದಲ್ಲಿ ನಮ್ಮೆಲ್ಲಾ ದುಃಖಗಳಿಗೆ ಕಾರಣ ಅತೃಪ್ತಿ, ಅಸೂಯೆ. ನಮ್ಮಲ್ಲಿ ಇಲ್ಲದೇ ಇರುವುದರ ಬಗೆಗೆ ಅತೃಪ್ತಿ ಪಡುವುದರ ಬದಲು ಇರುವುದರ ಬಗ್ಗೆ ತೃಪ್ತಿ ಪಡೋದಾದರೆ, ಏನಿದೆಯೋ ಅದರಲ್ಲಿ ತೃಪ್ತಿ ಪಡುವುದನ್ನು ಅಭ್ಯಾಸ ಮಾಡ್ಕೊಂಡ್ರೆ, ನಮ್ಮಲ್ಲಿ ಶಾಂತಿ ನೆಮ್ಮದಿ ಖಂಡಿತಾ ಸಿಗುತ್ತೆ.

೧೬. ದೈವಾಸುರ ಸಂಪದ್ವಿಭಾಗ ಯೋಗ ಶ್ಲೋ. ೧೯.

ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ । ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು ॥೧೬.೧೯॥

ಭಾವಾರ್ಥ: ಅಸೂಯೆಪರರು,ಕ್ರೂರ ಸ್ವಭಾವದವರು, ದುರ್ಜನರು (ಸಂಸಾರದಲ್ಲಿ ಅಧಮರಾದವರು ) ಇವರನ್ನು ಮತ್ತೆ ಮತ್ತೆ ಅಸುರೀಯ (ಗುಣದವರ) ಗರ್ಭದಲ್ಲಿ ಹುಟ್ಟುವಂತೆ ಮಾಡುತ್ತೇನೆ.

तानहं द्विषत: क्रूरान्संसारेषु नराधमान् |
क्षिपाम्यजस्रमशुभानासुरीष्वेव योनिषु || 16.19||

tān ahaṁ dviṣhataḥ krūrān sansāreṣhu narādhamān |
kṣhipāmy ajasram aśhubhān āsurīṣhv eva yoniṣhu || 16.19||

ಮುಂದಿನ ಶ್ಲೋಕಗಳೂ ತುಂಬಾ ಅರ್ಥಗರ್ಭಿತವಾಗಿದೆ.

ಮುಂದಿನ ಜನ್ಮದಲ್ಲೂ ಅವರು ಸನ್ನಡತೆ, ಸಚ್ಚಾರಿತ್ಯ ಬೆಳೆಸಿಕೊಳ್ದೆ ಹೋದ್ರೆ, ಅವರಿಗೆ ಅಧೋಗತಿ.

ಈ ಅಧ್ಯಾಯದಲ್ಲಿ, ಶ್ರೀಕೃಷ್ಣ ಪರಮಾತ್ಮ ‘ದೈವೀ ಸ್ವಭಾವ’ ಮತ್ತು ‘ಅಸುರೀ’ ಸ್ವಭಾವಗಳ ಲಕ್ಷಣಗಳನ್ನ ಹೇಳ್ತಾ 26 ಸದ್ಗುಣಗಳ ವಿಶ್ಲೇಷಣೆ 6 ಅಸುರೀ ಗುಣಗಳನ್ನ ವಿವರಿಸ್ತಾ ದೈವೀಸ್ವಭಾವ’ ಮತ್ತು ‘ಆಸುರೀಸ್ವಭಾವ’ ಹಾಗೂ ಅದರ ಗುಣಲಕ್ಷಣಗಳನ್ನು ಸ್ಪಷ್ಟವಾಗಿವಿವರಿಸಿದ್ದಾನೆ. ದೈವೀಸ್ವಭಾವ ಇದು ಜ್ಞಾನ ಸಾಧನ. ಆಸುರೀಸ್ವಭಾವ ಇದು ಜ್ಞಾನ ವಿರೋಧಿ. ಈ ಎರಡೂ ಸ್ವಭಾವಗಳು ಸಹಜವಾಗಿ ಎಲ್ಲರಲ್ಲೂ ಇದೆ. ಇದರ ಪ್ರಮಾಣ ಮಾತ್ರ ಬೇರೆ ಬೇರೆ, ಹಾಗೆಯೇ ಇದರ ಪ್ರಮಾಣದ ಮೇಲೆ, ಪ್ರತಿಯೊಬ್ಬರ ನಡೆ ನುಡಿ, ಗುಣಾವಗುಣಗಳು, ಸ್ವಭಾವ ಬೇರೆಬೇರೆಯಾಗಿರುತ್ತೆ. ನಾವು ಸದ್ಗುಣಗಳನ್ನು ವೃದ್ಧಿಸಿಕೊಳ್ಳುತ್ತಾ, ಅಸುರೀ ಗುಣಗಳನ್ನ ನಿಗ್ರಹಿಸಿಕೊಳ್ಳುತ್ತಾ ಹೋದದ್ದೇ ಆದರೆ, ನಮ್ಮ ದ್ವೇಷ ಅಸೂಯೆ ಮಾಯವಾಗಿ ಎಲ್ಲರೂ ಅನಸೂಯರೇ ಆಗಬಹುದಲ್ಲವೇ? (ಅಸೂಯೆ ಇಲ್ಲದವರು ಅನಸೂಯರು).

ಒನ್ನೊಂದು ಸಲ ನಮ್ಮಿಂದ ನಮಗೆ ಗೊತ್ತಿಲ್ದೇ ಏನೋ ತಪ್ಪು ಆಗಬಹುದು ಆದರೆ, ಗೊತ್ತಿದ್ದೂ ತಪ್ಪು ಮಾಡಿದ್ರೆ ಅದು ದುರ್ಗುಣಗಳಲ್ಲಿ ದುರ್ಗುಣ, ದೊಡ್ಡ ದುರ್ಗುಣ. ಇದು ಒಮ್ಮೊಮ್ಮೆ ದೊಡ್ಡ ಅನಾಹುತಕ್ಕೆ ಕಾರಣವಾಗಲೂಬಹುದು. ಭಗವದ್ಗೀತೆಗೆ ಸಂಬಂಧ ಪಟ್ಟಂತೆ ದುರ್ಯೋಧನನ ಉದಾಹರಣೆ ನೋಡೋಣ. ನಾವು ಸ್ವಲ್ಪ ಗಮನಿಸಿದ್ದೇ ಆದರೆ, ಪಾಂಡವರಿಗೂ ಕೌರವರಿಗೂ ವಿದ್ಯೆ ಕಲಿಸಿದ ಗುರುಗಳು ಒಬ್ಬರೇ, ಎಲ್ಲರೂ ವಿದ್ಯಾಸಂಪನ್ನರಾದರು. ಆದ್ರೆ ಕೌರವರಿಗೆ ವಿದ್ಯೆ ವಿನಯವನ್ನ, ವಿವೇಕವನ್ನ ಕೊಡ್ಲಿಲ್ಲ, ಲೋಭ, ಮದ ಮಾತ್ಸರ್ಯವೇ ಮೊದಲಾದ ಅಸುರೀ ಗುಣಗಳನ್ನ ಮೈಗೂಡಿಸಿ ಕೊಳ್ತಾ ಹೋದ್ರು. ಕೌರವರ ಅವಿವೇಕ, ಲೋಭಗುಣ, ಮಹಾ ಸಂಗ್ರಾಮಕ್ಕೇ ಕಾರಣವಾಯ್ತು. ದುರ್ಯೋಧನನ ಲೋಭಗುಣ ಎಲ್ಲೆ ಮೀರಿದ್ದು, ಅರ್ಧ ರಾಜ್ಯ ಬೇಡ, ಐದು ಗ್ರಾಮಗಳನ್ನೂ ಪಾಂಡವರಿಗೆ ಕೊಡಲಾರದಷ್ಟು ಲೋಭ.

ದುರ್ಯೋಧನನಿಗೆ, ಧರ್ಮ ಯಾವುದು, ಅಧರ್ಮ ಯಾವುದು ಗೊತ್ತಿರ್ಲಿಲ್ವಾ, ಗೊತ್ತಿತ್ತು. ಅವನ ಮಾತಲ್ಲೇ ಹೇಳುವುದಾದರೆ-

ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ, ಜಾನಾಮಿ ಪಾಪಂ ನ ಚ ಮೇ ನಿವೃತ್ತಿಃ. (ಪಾಂಡವಗೀತಾ /ಪ್ರಪನ್ನಗೀತಾ). – ಹೌದು, ನನಗೆ ಧರ್ಮ ಯಾವುದು ಅಧರ್ಮ ಯಾವುದೂ ಅಂತ ಗೊತ್ತಿದೆ ಆದರೆ ಅದರಿಂದ ಹೊರಬರಲಾರೆ ಅಂತ ಹೇಳ್ತಾನೆ. ಯಾವ ಹಂತದ್ಲಲೂ ತನ್ನ ತಪ್ಪನ್ನ ತಿದ್ದಿಕೊಳ್ಳುವುದೂ ಇಲ್ಲ, ಸಮರ್ಥಿಸಿಕೊಳ್ತಾನೆ ಹೋಗ್ತಾನೆ.

ನಮ್ಮ ಜೀವನ ಕ್ರಮದಲ್ಲಿ, ತಪ್ಪುಗಳು ಆಗದಂತೆ ನೋಡ್ಕೋ ಬೇಕು, ಗೊತ್ತಿದ್ದೂ ತಪ್ಪು ಮಾಡಲು ಹೋಗಬಾರದಲ್ವೇ? ದ್ವೇಷಾಸೂಯೆಗಳನ್ನ ಬದಿಗೊತ್ತಿ, ವಿವೇಕ, ವಿವೇಚನೆ ನಮ್ಮಲ್ಲಿ ಜಾಗೃತವಾಗಿರಲಿ.

18 ನೇ ಅಧ್ಯಾಯ ಮೋಕ್ಷಸಂನ್ಯಾಸಯೋ ಗ ಶ್ಲೋ. 71

ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ । ಸೋSಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥ 71 ॥

ಇದನ್ನು (ಭಗವದ್ಗೀತೆಯನ್ನ) ಶ್ರದ್ಧೆಯಿಂದ ಮತ್ತು ಅಸೂಯೆ ಇಲ್ಲದೆ ಕೇಳುವವರಿಗೂ ಕೂಡ ಪಾಪ ಕರ್ಮಗಳಿಂದ ಮುಕ್ತರಾಗಿ ಪುಣ್ಯವಂತರಿಗೆ ಲಭಿಸುವ ಪುಣ್ಯಲೋಕ ಹೊಂದುತ್ತಾರೆ – ಅನ್ನೋದು ಇದರ ಭಾವಾರ್ಥ.

यस्य नाहङ् कृतो भावो बुद्धिर्यस्य न लिप्यते |
हत्वाऽपि स इमाँल्लोकान्न हन्ति न निबध्यते || 18.17||

yasya nāhankṛito bhāvo buddhir yasya na lipyate |
hatvā ‘pi sa imāl lokān na hanti na nibadhyate || 18.17||

ಈ ಶ್ಲೋಕ, ಪಾಪ ಭೀತಿಯಿಂದಲಾದ್ರು, ದ್ವೇಷಾಸೂಯೆಗಳನ್ನು ಬಿಟ್ಟು ಸಚ್ಚಾರಿತ್ರ್ಯ, ಸನ್ನಡತೆ ನಮ್ಮದಾಗಿರಲಿ ಅನ್ನೋ ಅಭಿಪ್ರಾಯವನ್ನ ಒಳಗೊಂಡಿದೆ. ಇದನ್ನ ನಾವು ಮನಗಾಣಬೇಕು ಆಲ್ವಾ.

ಇದು ಒಂಥರಾ ಫಲಶ್ರುತಿ ಇದ್ದಹಾಗೆ. ನಾವು ಯಾವುದೇ ವ್ರತ ಕಥೆ ನೋಡಿದ್ರೂ ಕೊನೆಯಲ್ಲಿ – ಈ ವ್ರತ ಮಾಡೋದ್ರಿಂದ ನಮಗೆ ಏನೇನು ಲಾಭ, ಫಲ ಸಿಗುತ್ತೆ ಅನ್ನೋದು ಹೇಳಿರ್ತಾರೆ. ಸಿಗೋದು ಬಿಡೋದು ಭಗವಂತನ ಇಚ್ಛೆ. ಆದ್ರೆ, ಫಲಶ್ರುತಿ ಹೇಳಿಲ್ದಲೇ ಇದ್ರೆ ನಾವು ಸತ್ಯನಾರಾಯಣ ವ್ರತ ಇರ್ಲಿ, ಗೌರೀ ಗಣೇಶ ವ್ರತಾನೂ ಮಾಡ್ತಿದ್ವೋ ಇಲ್ವೋ !. ಜ್ಞಾನ ಕೊಡಪ್ಪ ಅಂತ ಕೇಳೋದು ಅಪರೂಪ. ಜ್ಞಾನದ ಜೊತೆಗೆ ಇವನ್ನೂ ಕೊಡು ಅಂತ ಬೇಕಾದ್ರೆ ಕೇಳ್ತಿವೆನೋ. ಇದು ಮಾನವ ಸಹಜ ಗುಣ.

ಯಾಕೋ ಶ್ರೀಸೂಕ್ತ ಜ್ಞಾಪಕಕ್ಕೆ ಬರ್ತಿದೆ – ಇದ್ರಲ್ಲಿ ನಮ್ಮ demand ನೋಡಿ. ನಾವು ಕಾಮ ಕರ್ಮಿಗಳು ಅನ್ನೋದು prove ಆಗ್ಹೋಗುತ್ತೆ. ಒಂದಾ ಎರಡಾ ನಮ್ಮ ಬೇಡಿಕೆ ಆನೆ ಕುದ್ರೆ ಇಂದ ಹಿಡ್ದು ಏನೇನು ಕೇಳ್ತೀವಿ ನೋಡಿ. –

ಅಶ್ವದಾಯೀ ಗೋದಾಯೀ ಧನದಾಯೀ ಮಹಾಧನೇ .ಧನಂ ಮೇ ಜುಷತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ ..

ಪುತ್ರಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿಗವೇ ರಥಂ .ಪ್ರಜಾನಾಂ ಭವಸಿ ಮಾತಾ ಆಯುಷ್ಮಂತಂ ಕರೋತು ಮಾಂ ..

ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋ ಧನಂ ವಸುಃ .ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನು ತೇ ..

ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ.. ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನಃ ..

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ ..ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಶ್ರೀಸೂಕ್ತಂ ಜಪೇತ್ಸದಾ .

ಜ್ಙಾಪಿಸ್ಕೊಳ್ತಾ ಹೋಗಿ, ಇಷ್ಟೇ ಅಲ್ಲ ಇನ್ನೂ ನಮ್ಮ list ಮುಗಿಯೋದೇ ಇಲ್ಲ.

ಇನ್ನೊಂದು ಥರ ಜನ ಇರ್ತಾರೆ – ಇವ್ರು, ನಾಸ್ತಿಕರೂ ಅಲ್ಲ ಆಸ್ತಿಕರೂ ಕೂಡ. ಇವ್ರಿಗೆ ಪೂಜೆ, ಪುನಸ್ಕಾರ ಎಲ್ಲಾ ಬೇಕು ಯಾಕೆ ಅಂದ್ರೆ, ಇದ್ರಿಂದ ಏನೋ ಫಲ ಸಿಗುತ್ತೆ, ನಮ್ಮ ಬೇಡಿಕೆ ಈಡೇರುತ್ತೆ ಅನ್ನೋ ನಂಬಿಕೆ, ಉದ್ದೇಶ. ನಮ್ಮ Park friends ಥರ. ಒಂದ್ಸಲ, ನಮ್ಮ ಹರಟೆ ಮಧ್ಯ park ನಲ್ಲಿ ಯಾವ್ದೋ ವಿಷಯಕ್ಕೆ ಬಂದಾಗ “ತ್ರಿಕೂಟ ರಹಸ್ಯ” ಅಂತ ವೇದಾಂತದ ಬಗ್ಗೆ ಶುರು ಮಾಡ್ದೆ. ನಾವು ಅಂದ್ರೆ (ಜೀವ), ಜಗತ್ತು ಇದನ್ನ ನಡೆಸ್ತಿರಬಹುದಾದ ಪರಮಾತ್ಮ (ಈಶ್ವರ) – ಇದು ರಹಸ್ಯ ಅಲ್ವೇ ಅನ್ನೋ ಅಷ್ಟರಲ್ಲೇ, ಹೌದ್ರೀ, ನಾವಿದೀವಿ, ಜಗತ್ತೂ ಇದೆ ಇದನ್ನ ನಡಿಸ್ಕೊಂಡ್ಹೋಗ್ತಿರೋ ಪರಮಾತ್ಮ ಇದಾನೆ, ಹಿಂದೂ ಇದೆಲ್ಲಾ ಇತ್ತು, ಈಗ್ಲೂ ಇದೆ, ಮುಂದೂ ಇರುತ್ತೆ ನಾವಿರ್ತೀವೋ ಬಿಡ್ತೀವೋ ಅದ್ಬೇರೆ. ಯಾಕೆ ತಲೆ ಕೆಡಿಸ್ಕೊ ಬೇಕು, ನಡೀರಿ ಒಂಭತ್ತಾಗ್ತಾ ಬಂತು ಮನೆಗೆ ಹೋಗೋಣ ಅಂತ ಎಲ್ರೂ ಎದ್ರು. ಹಾಗೆ, ಕೆಲವರಿಗೆ ಭಗವದ್ಗೀತೆ, ವೇದ-ಉಪನಿಷದ್ಗಳನ್ನ ಓದೋದ್ರಿಂದ ಕಾಮ್ಯ ಫಲ ಏನೂ ಸಿಗಲ್ವೇ? ಬರೀ ಸ್ವರ್ಗ ಅಂದ್ರೆ ಅದಿದ್ಯೋ ಇಲ್ವೋ ಯಾರಿಗ್ಗೊತ್ತು ಅನ್ನೋ ನಿಲುವು ಇವ್ರದ್ದು. ಇದು ನಮ್ಮ ನಿಲುವಾಗದಿರಲಿ, ಓದ್ತಾ,ಅರ್ಥೈಸಿಕೊಳ್ತಾ ಹೋದ್ರೆ ಮನಶ್ಶಾಂತಿ ಯಂತೂ ಸಿಗುತ್ತೆ. ಅದಕ್ಕಿಂತ ಇನ್ನು ಏನು ಬೇಕು ಆಲ್ವಾ.

ಮುಂದೆ, ಅರ್ಜುನ ಈಗ ನನ್ನ ಮೋಹ ನಾಶವಾಗಿದೆ, ಧೃಡ ಮನಸ್ಕನಾಗಿದ್ದೇನೆ, ನಿನ್ನ ಅನುಜ್ಞೆಯನ್ನು ಪಾಲಿಸ್ತೀನಿ ಅಂತ ಹೇಳ್ತಾನೆ. ಫಲ ಶ್ರುತಿಯಂತಿರುವ ಸಂಜಯನಿಂದ ಹೇಳಲ್ಪಟ್ಟ ಕೊನೆಯ ಶ್ಲೋಕವನ್ನು ನೋಡೋಣ.

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಫಾರ್ಥೋ ಧನುರ್ಧರಃ I ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮಮ.


ಮಂಕುತಿಮ್ಮನ ಕಗ್ಗವೊಂದನ್ನು ನೋಡೋಣ.

ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ-। ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ – ।। ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ । ಬಂಧು ಜೀವನ್ಮುಕ್ತ – ಮಂಕುತಿಮ್ಮ ।। 912

ಇಂದ್ರಿಯಗಳ ಅನುಭವಗಳನ್ನು ಪಡೆದು, ಬದುಕಿನ ಅನುಭವಗಳಿಂದ ಪಕ್ವವಾಗಿ, ಆ ಇಂದ್ರಿಯಗಳು ನೀಡುವ ಸುಖಗಳ ಅಪೇಕ್ಷೆಯನ್ನು ತೊರೆದು, ಅಂತರಂಗದಿಂದ ಬೆಳೆದು ಮೇಲೆ ಏರಿ, ಜಾಣತನದಿಂದ ಇಂದ್ರಿಯಗಳನ್ನು ಹತೋಟಿಗೆ ತಂದುಕೊಂಡು, ಅನ್ಯರ, ಎಂದರೆ ಇನ್ನೂ ಇಂದ್ರಿಯಗಳ ಸುಳಿಯಲ್ಲಿ ಇರುವವರನ್ನು ಸಂತೈಸುವ ಸ್ಥಿತಿಗೆ ತಲುಪಿದರೆ ಅವನೇ ‘ಜೀವನ್ಮುಕ್ತ ‘ ಎನ್ನುವ ಅಭಿಪ್ರಾಯ ಡಿ.ವಿ.ಜಿ. ಯವರದು.

—-==OOOOO==—–

One thought on “BhagavadGita’s Solution for Dealing with Envy

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s